ಇವತ್ತು ಗೂಗಲ್ ನಕ್ಷೆ ನೋಡುವವರಿಗೊಮ್ಮೆ ಅಚ್ಚರಿಯಾಗಬಹುದು. ಏಕೆಂದರೆ ನೀವು ತೆರಳಬೇಕಾದ ಸ್ಥಳಗಳನ್ನು ಗೂಗಲ್ ನಕ್ಷೆ ನಿಮ್ಮ ಮಾತೃಭಾಷೆಯಲ್ಲಿ ನೀಡುತ್ತಿದೆ. ಅಂದರೆ ಕನ್ನಡದಲ್ಲಿ! ಕನ್ನಡ ರಾಜ್ಯೋತ್ಸವದ ವಿಶೇಷವೋ ಏನೋ ಗೊತ್ತಿಲ್ಲ, ಆದರೆ ಗೂಗಲ್ ನಕ್ಷೆಯಲ್ಲಿ ಕನ್ನಡ ನೋಡಿ ಕನ್ನಡ ಪ್ರೇಮಿಗಳಿಗಂತೂ ಮೃಷ್ಟಾನ್ನ ಉಂಡಷ್ಟು ಸಂತಸವಾಗಿದ್ದು ಸತ್ಯ...ಇಷ್ಟು ದಿನ ಗೂಗಲ್ ನ ತಮಿಳು ನಾಡು ನಕ್ಷೆಯಲ್ಲಿ ತಮಿಳು ಭಾಷೆಯಲ್ಲಿಯೇ ಊರುಗಳ ಹೆಸರು ಕಾಣುತ್ತಿತ್ತು, ಆಂಧ್ರ ಪ್ರದೇಶದ ನಕ್ಷೆಯ ಮೇಲೆ ಕ್ಲಿಕ್ಕಿಸಿದರೆ ತೆಲುಗು ಅಕ್ಷರಗಳೂ ರಾರಾಜಿಸುತ್ತಿದ್ದವು. ಆದರೆ ಅಲ್ಲೂ ಎಂದಿನಂತೆ ಕನ್ನಡ ಮೂಲೆಗುಂಪಾಗಿತ್ತು. ಕನ್ನಡಿಗರು ಇಂಗ್ಲಿಷ್ ನಲ್ಲಿಯೇ ಕರ್ನಾಟಕದ ಊರುಗಳ ಹೆಸರುಗಳನ್ನು ನೋಡಿ ಸಮಾಧಾನ ಪಟ್ಟುಕೊಳ್ಳಬೇಕಿತ್ತು...ಆದರೆ ಇದ್ದಕ್ಕಿದ್ದಂತೆಯೇ ಇಂದಿನಿಂದ ಗೂಗಲ್ ನಕ್ಷೆಯಲ್ಲಿ ಕನ್ನಡ ಪ್ರತ್ಯಕ್ಷವಾಗಿದೆ! ಅಲ್ಲಲ್ಲಿ ಊರುಗಳ ಹೆಸರಿನಲ್ಲಿ ಕಾಗುಣಿತ ದೋಷಗಳಿದ್ದಿರಬಹುದು. ಅದನ್ನು ಸರಿಪಡಿಸಿಕೊಳ್ಳೋಣ. ಆದರೆ 'ಗೂಗಲ್ ನಕ್ಷೆಯಲ್ಲಿ ಕನ್ನಡ' ಈ ಬಾರಿಯ ರಾಜ್ಯೋತ್ಸವಕ್ಕೆ ಭರ್ಜರಿ ಉಡುಗೊರೆಯೇ ಸರಿ. ಕರ್ನಾಟಕದಲ್ಲಿ ಕನ್ನಡೀಕರಣದ ಯುಗಾರಂಭಕ್ಕೆ ಇದೊಂದು ಪುಟ್ಟ, ದಿಟ್ಟ ಹೆಜ್ಜೆ ಎಂದುಕೊಳ್ಳೋಣವೇ?
Kannadigas feel very happy today after seeing their mother tongue in Google Maps! Yes, Google India introduces Kannada language in google maps. Kannadigas can see their native places in Kannada language now!